Stotra sangraha

Subscribe to Stotra sangraha feed Stotra sangraha
ಮಂತ್ರ-ಸ್ತುತಿ-ಸ್ತೋತ್ರ-ದೇವರನಾಮಗಳು
Updated: 4 hours 49 min ago

ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು)

Fri, 01/03/2014 - 08:18

ಮನವ ಶೋಧಿಸಬೇಕೋ ನಿಚ್ಚ
ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ || ಪ ||

ಧರ್ಮ-ಅಧರ್ಮ ವಿಂಗಡಿಸಿ ನೀ
ಅಧರ್ಮದ ನರಗಳ ಬೇರೆ ಕತ್ತರಿಸಿ
ನಿರ್ಮಲಾಚಾರವ ಚರಿಸಿ ಪರ
ಬ್ರಹ್ಮ ಮೂರುತಿ ಪಾದಕಮಲವ ಭಜಿಸಿ || ೧ ||

ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀನೇ ಜಾಣೋ ಮುಕ್ತಿ
ನಿನಗೆ ದೂರಿಲ್ಲವೋ ಅದೇ ಒಂದು ಗೇಣೋ || ೨ ||

ಆತನ್ನ ನಂಬಿ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಳ್ವನಲ್ಲ
ನೀತಿವಂತರೆ ಕೇಳಿರೆಲ್ಲ ನಮ-
ಗಾತನೆ ಗತಿಯೀವ ಪುರಂದರ ವಿಠಲ || ೩ ||


Categories: Stotra - Pooja

ತೊರೆದು ಜೀವಿಸಬಹುದೆ (ಶ್ರೀಕನಕದಾಸರು)

Fri, 07/19/2013 - 23:05

ರಾಗ – ಮುಖಾರಿ                   ತಾಳ – ಏಕ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ
ತೊರೆದು ಜೀವಿಸಬಹುದೆ || ಪ ||

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಕರಪಿಡಿದೆನ್ನನು ಕಾಯೊ ಕರುಣಾನಿಧಿ || ಅ.ಪ ||

ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು
ರಾಯ ಮುನಿದರೆ ರಾಜ್ಯವ ಬಿಡಬಹುದು
ಕಾಯಜಪಿತ ನಿನ್ನಡಿಯ ಬಿಡಲಾಗದು || ೧ ||

ಒಡಲು ಹಸಿದರೆ ಅನ್ನವ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಲು ಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು
ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು || ೨ ||

ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು
ಮಾನಾಭಿಮಾನವ ತಗ್ಗಿಸಬಹುದು
ಪ್ರಾಣದಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು || ೩ ||


Categories: Stotra - Pooja

ಶ್ರೀತುಲಸೀಮಾಹಾತ್ಮ್ಯಮ್

Mon, 07/08/2013 - 17:26

 

ಶ್ರೀತುಲಸೀಮಾಹಾತ್ಮ್ಯಮ್  

ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿ
ಗೋಬ್ರಹ್ಮಬಾಲಪಿತೃಮಾತೃವಧಾದಿಕಾನಿ |
ನಶ್ಯಂತಿ ತಾನಿ ತುಲಸೀವನದರ್ಶನೇನ
ಗೋಕೋಟಿದಾನಸದೃಶಂ ಫಲಮಾಪ್ನುವಂತಿ || ೧ ||

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ಥತಾ |
ವಾಸುದೇವಾದಯೋ ದೇವಾ ವಸಂತಿ ತುಲಸೀವನೇ || ೨ ||

ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ || ೩ ||

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ೪ ||
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣಮನಃಪ್ರಿಯೇ || ೫ ||

ರಾಜದ್ವಾರೇ ಸಭಾಮಧ್ಯೇ ಸಂಗ್ರಾಮೇ ಶತ್ರುಪೀಡನೇ |
ತುಲಸೀಸ್ಮರಣಂ ಕುರ್ಯಾತ್ ಸರ್ವತ್ರ ವಿಜಯೀ ಭವೇತ್ || ೬ ||

ತುಲಸ್ಯಮೃತಜನ್ಮಾಽಸಿ ಸದಾ ತ್ವಂ ಕೇಶವಪ್ರಿಯೇ |
ಕೇಶವಾರ್ಥೇ ಚಿನೋಮಿ ತ್ವಾಂ ವರದಾ ಭವ ಶೋಭನೇ || ೭ ||

ಮೋಕ್ಷೈಕಹೇತೋರ್-ಧರಣೀ-ಧರಸ್ಯ ವಿಷ್ಣೋಃ  
ಸಮಸ್ತಸ್ಯ ಗುರೋಃ ಪ್ರಿಯಸ್ಯ |  
ಆರಾಧನಾರ್ಥಂ ಪುರುಷೋತ್ತಮಸ್ಯ  
ಛಿಂದೇ ದಲಂ ತೇ ತುಲಸಿ ಕ್ಷಮಸ್ವ || ೮ ||

ಕೃಷ್ಯಾರಂಭೇ ತಥಾ ಪುಣ್ಯೇ ವಿವಾಹೇ ಚಾರ್ಥಸಂಗ್ರಹೇ |
ಸರ್ವಕಾರ್ಯೇಷು ಸಿದ್ದ್ಯರ್ಥಂ ಪ್ರಸ್ಥಾನೇ ತುಲಸೀಂ ಸ್ಮರೇತ್ || ೯ ||

ಯಃ ಸ್ಮರೇತ್ ತುಲಸೀಂ ಸೀತಾಂ ರಾಮಂ ಸೌಮಿತ್ರಿಣಾ ಸಹ |
ವಿನಿರ್ಜಿತ್ಯ ರಿಪೂನ್ ಸರ್ವಾನ್ ಪುನರಾಯಾತಿ ಕಾರ್ಯಕೃತ್ || ೧೦ ||

ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃಪಾವನೀ  
ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಽಂತಕತ್ರಾಸಿನೀ |  
ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ  
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ || ೧೧ ||  

ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜಾದಿಭಿಃ |
ಸದ್ಯೋ ಭವತಿ ಪೂತಾತ್ಮಾ ಕರ್ಣಯೋಸ್ತುಲಸೀಂ ಧರನ್ || ೧೨ ||

ಚತುಃ ಕರ್ಣೇ ಮುಖೇ ಚೈಕಂ ನಾಭಾವೇಕಂ ತಥೈವ ಚ |  
ಶಿರಸ್ಯೇಕಂ ತಥಾ ಪ್ರೋಕ್ತ ತೀರ್ಥೇ ತ್ರಯಮುದಾಹೃತಮ್ || ೧೩ ||  
 
ಅನ್ನೋಪರಿ ತಥಾ ಪಂಚ ಭೋಜನಾಂತೇ ದಲತ್ರಯಮ್ |  
ಏವಂ ಶ್ರೀತುಲಸೀಂ ಗ್ರಾಹ್ಯಾ ಅಷ್ಟಾದಶದಲಾ ಸದಾ || ೧೪ ||  

|| ಇತಿ ಶ್ರೀತುಲಸೀಮಾಹಾತ್ಮ್ಯಮ್ ||


Categories: Stotra - Pooja

ರಾಯಬಾರೊ ತಂದೆತಾಯಿ ಬಾರೊ (ಶ್ರೀಜಗನ್ನಾಥ ದಾಸರು)

Thu, 07/04/2013 - 20:46

ರಾಗ – ಆನಂದಭೈರವಿ        ತಾಳ – ಏಕತಾಳ

ರಾಯಬಾರೊ ತಂದೆತಾಯಿ ಬಾರೊ
ನಮ್ಮ ಕಾಯಿ ಬಾರೊ
ಮಾಯಿಗಳ ಮರ್ದಿಸಿದ ರಾಘವೇಂದ್ರ || ಪ ||

ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ
ಮಂದನ ಮತಿಗೆ ರಾಘವೇಂದ್ರ || ೧ ||

ಭಾಸುರಚರಿತನೆ ಭೂಸುರವಂದ್ಯನೆ
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡೆಯ ರಾಘವೇಂದ್ರ || ೨ ||

ರಾಮಪದಸರಸೀರುಹಭೃಂಗ ಕೃಪಾಂಗ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ || ೩ ||

ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ
ತೋರಿಸಿದೆ ಸರ್ವರಿಗೆ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ || ೪ ||

ಭೂತಳನಾಥನ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ-
ನ್ನಾಥವಿಠಲನ ಪ್ರೀತಿಪಾತ್ರ ರಾಘವೇಂದ್ರ || ೫ ||


Categories: Stotra - Pooja

ಅಪಮೃತ್ಯು ಪರಿಹರಿಸೋ ಅನಿಲದೇವ (ಶ್ರೀಜಗನ್ನಾಥ ದಾಸರು)

Wed, 07/03/2013 - 21:12

ರಾಗ – ಕಾಂಬೋದಿ              ತಾಳ – ಝಂಪೆ

ಅಪಮೃತ್ಯು ಪರಿಹರಿಸೋ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ನಿನ್ನುಳಿದು || ಪ ||

ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನದಲೆನ್ನುದಾಸೀನ ಮಾಡುವುದು
ನಿನಗೆ ಅನುಚಿತೋಚಿತವೆ ಸಜ್ಜನಶಿಖಾಮಣಿಯೆ || ೧ ||

ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದರಸು
ಹರಿಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರ್ಯ ನೀ ದಯಾಕರನೆಂದು ಪ್ರಾರ್ಥಿಸುವೆ || ೨ ||

ಭವರೋಗ ಮೋಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಜವನ ಬಾಧೆಯ ಬಿಡಿಸೋ ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದೊ || ೩ ||

ಜ್ಞಾನವಾಯುರೂಪಕನೆ ನೀನಹುದೊ ವಾಣಿ ಪಂಚಾ
ನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾ ನಿನ್ನ ಮರೆಹೊಕ್ಕೆ
ದಾನವಾರಣ್ಯಕೃಶಾನು ಸರ್ವದಾ ಎನ್ನ || ೪ ||

ಸಧನ ಶರೀರವಿದು ನೀ ದಯದಿಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯ
ವೇದವಾದೋದಿತ ಜಗನ್ನಾಥವಿಠಲ
ಪಾದಭಕುತಿಯ ಕೊಟ್ಟು ಮೋದವನು ಕೊಡು ಸತತ || ೫ ||


Categories: Stotra - Pooja

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ (ಶ್ರೀಪುರಂದರದಾಸರು)

Mon, 05/06/2013 - 08:49

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ || ಪ ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ ||

ಸಂತೆ ನೆರೆಯಿತು ನಾನಾ ಪರಿ
ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ || ೨ ||

ಆಡುವ ಮಕ್ಕಳು ಮನೆಯ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು || ೩ ||

ವಸತಿಕಾರನು ವಸತಿಗೆ ಬಂದಂತೆ
ಹೊತ್ತಾರೆದ್ದು ಹೊರಟು ಹೋದಂತೆ || ೪ ||

ಸಂಸಾರ ಪಾಶವ ನೀನೇ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ || ೫ ||


Categories: Stotra - Pooja

ಶ್ರೀಮಂಗಲಾಷ್ಟಕಮ್

Sun, 08/19/2012 - 20:53

ಶ್ರೀಮಂಗಲಾಷ್ಟಕಮ್  

ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲ-ಭೂಃ ಸೂನುರ್ಗರುತ್ಮಾನ್ ರಥಃ
ಪೌತ್ರಶ್ಚಂದ್ರ-ವಿಭೂಷಣಃ ಸುರ-ಗುರು ಶೇಷಶ್ಚ ಶಯ್ಯಾ ಪುನಃ |
ಬ್ರಹ್ಮಾಂಡಂ ವರ-ಮಂದಿರಂ ಸುರ-ಗಣಾಃ ಯಸ್ಯ ಪ್ರಭೋಃ ಸೇವಕಾಃ
ಸ ತ್ರೈಲೋಕ್ಯ-ಕುಟುಂಬ-ಪಾಲನ-ಪರಃ ಕುರ್ಯಾದ್ಧರಿರ್ಮಂಗಲಮ್ || ೧ ||

ಪಿಡಿಎಪ್ ಕಡತ

ಬ್ರಹ್ಮಾ ವಾಯು-ಗಿರೀಶ-ಶೇಷ-ಗರುಡಾ ದೇವೇಂದ್ರ-ಕಾಮೌ ಗುರು-
ಚಂದ್ರಾರ್ಕೌ ವರುಣಾನಲೌ ಮನು-ಯಮೌ ವಿತ್ತೇಶ-ವಿಘ್ನೇಶ್ವರೌ |
ನಾಸತ್ಯೌ ನಿರೃತಿರ್ಮರುದ್-ಗಣ-ಯುತಾಃ ಪರ್ಜನ್ಯ-ಮಿತ್ರಾದಯಃ
ಸಸ್ತ್ರೀಕಾಃ ಸುರ-ಪುಂಗವಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ೨ ||

ವಿಶ್ವಾಮಿತ್ರ-ಪರಾಶರೌರ್ವ-ಭೃಗವೋಽಗಸ್ತ್ಯಃ ಪುಲಸ್ತ್ಯಃ ಕ್ರತುಃ
ಶ್ರೀಮಾನತ್ರಿ-ಮರೀಚ್ಯುಚಥ್ಯ-ಪುಲಹಾಃ ಶಕ್ತಿರ್-ವಸಿಷ್ಠೋಽಂಗಿರಾಃ
ಮಾಂಡವ್ಯೋ ಜಮದಗ್ನಿ-ಗೌತಮ-ಭರದ್ವಾಜಾದಯ-ಸ್ತಾಪಸಾಃ
ಶ್ರೀಮದ್-ವಿಷ್ಣು-ಪದಾಂಬುಜೈಕ-ಶರಣಾಃ ಕುರ್ವಂತು ನೋ ಮಂಗಲಮ್ || ೩ ||

ಮಾಂಧಾತಾ ನಹುಷೋಽಂಬರೀಷ-ಸಗರೌ ರಾಜಾ ಪೃಥುರ್ಹೈಹಯಃ
ಶ್ರೀಮಾನ್ ಧರ್ಮ-ಸುತೋ ನಳೋ ದಶರಥೋ ರಾಮೋ ಯಯಾತಿರ್-ಯದುಃ |
ಇಕ್ಷ್ವಾಕುಶ್ಚ ವಿಭೀಷಣಶ್ಚ ಭರತಶ್ಚೋತ್ತಾನಪಾದ-ಧ್ರುವಾ-
ವಿತ್ಯಾದ್ಯಾ ಭುವಿ ಭೂಭುಜಶ್ಚ ಸತತಂ ಕುರ್ವಂತು ನೋ ಮಂಗಲಮ್ || ೪ ||

ಶ್ರೀ-ಮೇರುರ್ಹಿಮವಾಂಶ್ಚ ಮಂದರ-ಗಿರಿಃ ಕೈಲಾಸ-ಶೈಲಸ್ತಥಾ
ಮಾಹೇಂದ್ರೋ ಮಲಯಶ್ಚ ವಿಂಧ್ಯ-ನಿಷಧೌ ಸಿಂಹಸ್ತಥಾ ರೈವತಃ |
ಸಹ್ಯಾದ್ರಿರ್ವರ-ಗಂಧಮಾದನ-ಗಿರಿರ್ಮೈನಾಕ-ಗೋಮಾಂತಕಾ-
ವಿತ್ಯಾದ್ಯಾ ಭುವಿ ಭೂಧರಾಶ್ಚ ಸತತಂ ಕುರ್ವಂತು ನೋ ಮಂಗಲಮ್ || ೫ ||

ಗಂಗಾ-ಸಿಂಧು-ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗು-ಸರಯೂಃ ಶ್ರೀ-ಗಂಡಕೀ ಗೋಮತೀ |
ಕಾವೇರೀ-ಕಪಿಲಾ-ಪ್ರಯಾಗ-ಕಿಟಿಜಾ-ನೇತ್ರಾವತೀತ್ಯಾದಯೋ
ನದ್ಯಃ ಶ್ರೀಹರಿ-ಪಾದ-ಪಂಕಜ-ಭುವಃ ಕುರ್ವಂತು ನೋ ಮಂಗಲಮ್ || ೬ ||

ವೇದಾಶ್ಚೋಪನಿಷದ್-ಗಣಾಶ್ಚ ವಿವಿಧಾಃ ಸಾಂಗಾಃ ಪುರಾಣಾನ್ವಿತಾ
ವೇದಾಂತಾ ಅಪಿ ಮಂತ್ರ-ತಂತ್ರ-ಸಹಿತಾಸ್ತರ್ಕಾಃ ಸ್ಮೃತೀನಾಂ ಗಣಾಃ |
ಕಾವ್ಯಾಲಂಕೃತಿ-ನೀತಿ-ನಾಟಕ-ಯುತಾಃ ಶಬ್ದಾಶ್ಚ ನಾನಾ-ವಿಧಾಃ
ಶ್ರೀವಿಷ್ಣೋರ್ಗುಣ-ನಾಮ-ಕೀರ್ತನ-ಪರಾಃ ಕುರ್ವಂತು ನೋ ಮಂಗಲಮ್ || ೭ ||

ಆದಿತ್ಯಾದಿ-ನವ-ಗ್ರಹಾಃ ಶುಭ-ಕರಾ ಮೇಷಾದಯೋ ರಾಶಯೋ
ನಕ್ಷತ್ರಾಣಿ ಸ-ಯೋಗಕಾಶ್ಚ ತಿಥಯಸ್ತದ್-ದೇವತಾಸ್ತದ್-ಗಣಾಃ |
ಮಾಸಾಬ್ದಾ ಋತವಸ್ತಥೈವ ದಿವಸಾಃ ಸಂಧ್ಯಾಸ್ತಥಾ ರಾತ್ರಯಃ
ಸರ್ವೇ ಸ್ಥಾವರ-ಜಂಗಮಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ೮ ||

ಇತ್ಯೇತದ್ ವರ-ಮಂಗಲಾಷ್ಟಕಮಿದಂ ಶ್ರೀರಾಜರಾಜೇಶ್ವರೇ-
ಣಾಽಖ್ಯಾತಂ ಜಗತಾಮಭೀಷ್ಟ-ಫಲ-ದಂ ಸರ್ವಾಶುಭ-ಧ್ವಂಸನಮ್ |
ಮಾಂಗಲ್ಯಾದಿ-ಶುಭ-ಕ್ರಿಯಾಸು ಸತತಂ ಸಂಧ್ಯಾಸು ವಾ ಯಃ ಪಠೇದ್
ಧರ್ಮಾರ್ಥಾದಿ-ಸಮಸ್ತ-ವಾಂಛಿತ-ಫಲಂ ಪ್ರಾಪ್ನೋತ್ಯಸೌ ಮಾನವಃ || ೯ ||

|| ಇತಿ ಶ್ರೀರಾಜರಾಜೇಶ್ವರಯತಿವಿರಚಿತಂ ಮಂಗಲಾಷ್ಟಕಂ ಸಂಪೂರ್ಣಮ್ ||


Categories: Stotra - Pooja

ಎದುರಾರೋ ಗುರುವೆ ಸಮನಾರೊ (ಶ್ರೀವ್ಯಾಸರಾಯರು)

Thu, 08/16/2012 - 12:23

ರಾಗ: ಆನಂದಭೈರವಿ             ಆದಿತಾಳ

ಎದುರಾರೊ ಗುರುವೆ ಸಮನಾರೊ || ಪ ||
ಮದನಗೋಪಾಲನ ಪ್ರಿಯ ಜಯರಾಯ || ಅ.ಪ ||

ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ-
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೋಳಡಗೋರು ನಿಮ್ಮ ಭೀತಿಯಲಿ || ೧ ||

ಕುಟಿಲಮತಗಳೆಂಬೊ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ-
ತ್ಕಟದಿ ಮೆರೆದೆ ಬುಧಕಟಕಾಬ್ಜಮಿತ್ರ  || ೨ ||

ಅಮಿತದ್ವಿಜಾವಳಿಕುಮುದಗಳರಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲಸುಕೀರ್ತಿಯ ಪಡೆದೆಯೊ ಚಂದ್ರ || ೩ ||

ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು-
ಧಾದಿಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ-
ಬೋಧೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು || ೪ ||

ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಗಿಟ್ಟು |
ಶ್ರೀಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರನ್ಯಾಯಸುಧಾ ಪಡೆದ ಯತೀಂದ್ರ || ೫ ||

ವನಜನಾಭನ ಗುಣಮಣಿಗಳು  ಸರ್ವಜ್ಞ-
ಮುನಿಕೃತಗ್ರಂಥಗಳವನಿಯೊಳಡಗಿರೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನಸುಖಸಾಧನ ಮಾಡಿದ್ಯೊ ಧೀರ || ೬ ||

ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿಮತ್ತೇಭಕಂಠೀರವಾಕ್ಷೋಭ್ಯ-
ತೀರ್ಥಕರಜ ಜಯತೀರ್ಥಯತೀಂದ್ರ || ೭ ||


Categories: Stotra - Pooja

ಹೊಸಗಣ್ಣು ಎನಗೆ ಹಚ್ಚಲಿಬೇಕು (ಶ್ರೀಇಂದಿರೇಶ)

Wed, 08/15/2012 - 11:35

ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ |
ವಸುದೇವ ಸುತನ ಕಾಂಬುದಕೆ || ಪ ||

ಘಸಣಿಯಾಗುವೆ ಭವ ವಿಷಯ ವಾರುಧಿಯೊಳು |
ಶಶಿಮುಖಿಯೆ ಕರುಣದಿ ಕಾಯೆ || ಅ.ಪ ||

ಪರರ ಅನ್ನವನುಂಡು ಪರರ ಧನವ ಕೊಂಡು |
ಪರಿ ಪರಿಯ ಕ್ಲೇಶಗಳನುಂಡು |
ವರಲಕ್ಷ್ಮೀ ನಿನ್ನ ಚಾರು ಚರಣಗಳ ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ || ೧ ||

ಮಂದಹಾಸಿನಿ ಭವಸಿಂಧುವಿನೊಳಗಿಟ್ಟು |
ಚಂದವೇ ಎನ್ನ ನೋಡುವುದು |
ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ | ಮಂದರಧರನ ತೋರಮ್ಮ || ೨ ||

ಅಂದಚಂದಗಳೊಲ್ಲೆ ಬಂಧುಬಳಗ ಒಲ್ಲೆ |
ಬಂಧನಕೆಲ್ಲ ಕಾರಣವು |
ಇಂದಿರೇಶನ ಪಾದದ್ವಂದ್ವವ ತೋರಿ ಹೃ | ನ್ಮಂದಿರದೊಳು ಬಂದು ಬೇಗ || ೩ ||


Categories: Stotra - Pooja

ನದೀ ಸ್ತೋತ್ರಮ್

Mon, 07/16/2012 - 11:45

ನದೀ ಸ್ತೋತ್ರಮ್

ನದೀ ಸ್ತೋತ್ರಂ  ಪ್ರವಕ್ಷ್ಯಾಮಿ ಸರ್ವಪಾಪಪ್ರಣಾಶನಮ್ |
ಭಾಗೀರಥೀ ವಾರಣಾಸೀ ಯಮುನಾ ಚ ಸರಸ್ವತೀ || ೧ ||

ಫಲ್ಗುನೀ ಶೋಣಭದ್ರಾ ಚ ನರ್ಮದಾ ಗಂಡಕೀ ತಥಾ |
ಮಣಿಕರ್ಣಿಕಾ ಗೋಮತೀ ಪ್ರಯಾಗೀ ಚ ಪುನಃ ಪುನೀ || ೨ ||

ಗೋದಾವರೀ ಸಿಂಧುನದೀ ಸರಯೂರ್ವರ್ಣಿನೀ ತಥಾ |
ಕೃಷ್ಣವೇಣೀ ಭೀಮರಥೀ ಖಾಗಿನೀ ಭವನಾಶಿನೀ || ೩ ||

ತುಂಗಭದ್ರಾ ಮಲಹರೀ ವರದಾ ಚ ಕುಮುದ್ವತೀ |
ಕಾವೇರೀ ಕಪಿಲಾ ಕುಂತೀ ಹೇಮಾವತೀ ಹರಿದ್ವತೀ || ೪ ||

ನೇತ್ರಾವತೀ ವೇದವತೀ ಸುದ್ಯೋತೀ ಕನಕಾವತೀ |
ತಾಮ್ರಪರ್ಣೀ ಭರದ್ವಾಜಾ ಶ್ವೇತಾ ರಾಮೇಶ್ವರೀ ಕುಶಾ || ೫ ||

ಮಂದರೀ ತಪತೀ ಕಾಲೀ ಕಾಲಿಂದೀ ಜಾಹ್ನವೀ ತಥಾ |
ಕೌಮೋದಕೀ ಕುರುಕ್ಷೇತ್ರಾ ಗೋವಿಂದಾ ದ್ವಾರಕೀ ಭವೇತ್ || ೬ ||

ಬ್ರಾಹ್ಮೀ ಮಾಹೇಶ್ವರೀ ಮಾತ್ರಾ ಇಂದ್ರಾಣೀ ಅತ್ರಿಣೀ ತಥಾ |
ನಲಿನೀ ನಂದಿನೀ ಸೀತಾ ಮಾಲತೀ ಚ ಮಲಾಪಹಾ || ೭ ||

ಸಂಭೂತಾ ವೈಷ್ಣವೀ ವೇಣೀ ತ್ರಿಪಥಾ ಭೋಗವತೀ ತಥಾ |
ಕಮಂಡಲು ಧನುಷ್ಕೋಟೀ ತಪಿನೀ ಗೌತಮೀ ತಥಾ || ೮ ||

ನಾರದೀ ಚ ನದೀ ಪೂರ್ಣಾ ಸರ್ವನದ್ಯಃ ಪ್ರಕೀರ್ತಿತಾಃ |
ಪ್ರಾತಃಕಾಲೇ ಪಠೇನ್ನಿತ್ಯಂ ಸ್ನಾನಕಾಲೇ ವಿಶೇಷತಃ || ೯ ||

ಕೋಟಿಜನ್ಮಾರ್ಜಿತಂ ಪಾಪಂ ಸ್ಮರಣೇನ ವಿನಶ್ಯತಿ |
ಇಹಲೋಕೇ ಸುಖೀ ಭೂತ್ವಾ ವಿಷ್ಣುಲೋಕಂ ಸಗಚ್ಛತಿ || ೧೦ ||

|| ಇತಿ ನಾರದೀಯಪುರಾಣೇ ನದೀಸ್ತೋತ್ರಂ ಸಂಪೂರ್ಣಮ್ ||


Categories: Stotra - Pooja

ಯತಿಕುಲಮುಕುಟ ಶ್ರೀಜಯತೀರ್ಥ

Sat, 07/07/2012 - 21:56

ಯತಿಕುಲಮುಕುಟ ಶ್ರೀಜಯತೀರ್ಥ – ಸದ್ಗುಣಭರಿತ || ಪ ||
ಅತಿಸದ್ಭಕುತಿಲಿ ನುತಿಪ ಜನರ ಸಂ-
ತತ ಪಾಲಿಸುತಲಿ ಪೃಥಿವಿಲಿ ಮೆರೆವ || ಅ.ಪ ||

ಶ್ರೀಮಧ್ವಮತವಾರಿಧಿ ನಿಜಸೋಮ – ಅಗಣಿತಸನ್ಮಹಿಮ
ಆ ಮಹಾ ಭಕ್ತಾರ್ತಿಹ ನಿಷ್ಕಾಮ – ಮುನಿಸಾರ್ವಭೌಮ
ರಾಮಪದಾರ್ಚಕ ಈ ಮಹೀಸುರರನು
ಪ್ರೇಮದಿ ಪಾಲಿಪ ಕಾಮಿತಫಲದ || ೧ ||

ಮಧ್ವಮುನಿಗಳ ಗ್ರಂಥಕೆ ವ್ಯಾಖ್ಯಾನ – ರಚಿಸಿದ ಸುಜ್ಞಾನ
ವಿದ್ಯಾರಣ್ಯನ ಸದ್ವಾದದಿ ನಿಧನ – ಗೈಸಿದ ಸುಖಸದನ
ಅದ್ವೈತಾಟವಿದಗ್ಧ ಕೃತಾನಲ
ಸದ್ವೈಷ್ಣವಹೃತ್ಪದ್ಮಸುನಿಲಯ || ೨ ||

ಲಲಿತ ಮಂಗಳವೇಡಿಸ್ಥ ರಘುನಾಥ – ವನಿತಾಸಂಜಾತ
ನಿಲಯ ಮಳಖೇಡ ಕಾಗಿಣಿ ತೀರ – ವಾಸ ತಾಪತ್ರಯದೂರ
ನಲಿವ ವರದೇಶವಿಠಲನ ಒಲುಮೆಯ
ಇಳೆಯೊಳು ಬೋಧಿಪ ಅಲವಬೋಧಾಪ್ತಾ || ೩ ||


Categories: Stotra - Pooja

ವಂದನೆಗಳು…..

Fri, 07/06/2012 - 18:00

ವಾಚಕ ವೃಂದಕ್ಕೆ ಹಾರ್ದಿಕ ಅಭಿನಂದನೆಗಳು. ಸ್ತುತಿ,ಸ್ತೋತ್ರಸಾಹಿತ್ಯ ಮತ್ತು ಹರಿದಾಸರ ಕೃತಿಗಳು ನಾವು ನಿತ್ಯ ಪಠಿಸುವ ಭಕ್ತಿರತ್ನಗಳಾಗಿವೆ. ಈ ಸಮೃದ್ಧ ಸಾಹಿತ್ಯವನ್ನು ಪರಿಚಯಿಸುವಲ್ಲಿ “ಸ್ತೋತ್ರ ಸಂಗ್ರಹ” ಒಂದು ಚಿಕ್ಕ ಪ್ರಯತ್ನ. ಅನೇಕ ಚಿಕ್ಕ, ದೊಡ್ಡ ಕೃತಿಗಳನ್ನು ಹಂತ ಹಂತವಾಗಿ ಕೊಡಲಾಗುವುದು. ಮುಂಬರುವ ದಿನಗಳಲ್ಲಿ ಕೆಲವು ಕೃತಿಗಳನ್ನು ಅನುವಾದ ಸಹಿತ ಕೊಡುವ ಇಚ್ಛೆಯಿದೆ. ಭಾವಿಕರು ಈ ಭೂಮಿಯ ಯಾವುದೆ ಭಾಗದಲ್ಲಿ ಇದ್ದರೂ, ಈ ಸ್ತೋತ್ರ ಸಂಗ್ರಹವು ಅವರನ್ನು ತನ್ನ ಸಂಪ್ರದಾಯ, ಪರಂಪರೆಗೆ ಹತ್ತಿರವಾಗಿಸುವಲ್ಲಿ ಸಹಾಯಕವಾಗಿದೆ. ಈ ಪ್ರಯತ್ನದ ಸದುಪಯೋಗವು ಸಜ್ಜನರಿಗೆ ಆಗಬೇಕೆಂಬುದೆ ನನ್ನ ಹಾರ್ದಿಕಾಶಯ.

ವಾಚಕವೃಂದ ಸಲಹೆ, ಸೂಚನೆಗಳನ್ನು ಕೊಟ್ಟು ಪ್ರೋತ್ಸಾಹಿಸಬೇಕು. ನಿಮ್ಮ ಪ್ರೋತ್ಸಾಹ ನನ್ನ ಎಕೈಕ ಅಪೇಕ್ಷೆ. ಯಾವುದೇ ದೋಷಗಳು, ತಪ್ಪುಗಳು, ಪಾಠಾಂತರಗಳು ಗಮನಕ್ಕೆ ಬಂದರೆ ತಕ್ಷಣ ಸೂಚಿಸಬೇಕು. ಇದು ಅತ್ಯವಶ್ಯಕ. ಯಾವುದೇ ವಿಶೇಷ ಕೃತಿಗಳ ಬೇಡಿಕೆಯಿದ್ದರೆ ಸೂಚಿಸಬೇಕು. ನಿಮ್ಮಲ್ಲಿ ಯಾವುದಾದರು ವಿಶಿಷ್ಟ ಕೃತಿಗಳು ಇದ್ದರೆ ಒದಗಿಸಿಕೊಟ್ಟಲ್ಲಿ ಈ ಸಂಗ್ರಹವನ್ನು ಇನ್ನೂ ಸಮೃದ್ಧವಾಗಿಸಲು ಸಹಾಯಕವಾಗುವುದು. ಇತ್ತೀಚಿಗೆ ಅನೇಕ ಹೊಸ ಸಂಗ್ರಹಗಳು ಪ್ರಕಟವಾಗುತ್ತಲಿವೆ. ನೀವು ಅವುಗಳನ್ನು ಸ್ತೋತ್ರಸಂಗ್ರಹಕ್ಕೆ ಪೂರೈಸಿ ಸಹಾಯ ಮಾಡಬಹುದು.

ಶ್ರೀವಿಷ್ಣುಸಹಸ್ರನಾಮ ಶ್ರೀವೆಂಕಟೇಶ ಸ್ತೋತ್ರ ಮಂಗಳಾಷ್ಟಕ ಶ್ರೀಹರಿವಾಯುಸ್ತುತಿ ಶ್ರೀಜಯತೀರ್ಥ ಸ್ತುತಿ ಶ್ರೀರಾಘವೇಂದ್ರ ಸ್ತೋತ್ರ ಶ್ರೀನವಗ್ರಹ ಸ್ತೋತ್ರಗಳು ಪಂಚರತ್ನ ಸುಳಾದಿಗಳು ಮಧ್ವನಾಮ ಕೇಶವಾದಿ ನಾಮಗಳು

ಸ್ತೋತ್ರ ಸಂಗ್ರಹವನ್ನು ನಿಮ್ಮ ಆಪ್ತೇಷ್ಟರಲ್ಲಿ ಪ್ರಸರಿಸಿ, ಬೆಳೆಸಿ.

ಧನ್ಯವಾದಗಳು – ಹರೇ ಶ್ರೀನಿವಾಸ.


Categories: Stotra - Pooja

ಶ್ರೀಪುಂಡರೀಕ ವರದಾ ಹರಿ ವಿಠ್ಠಲ

Sat, 06/30/2012 - 12:32

ತರುಣ ತುಲಸಿಮಾಲಾ ತಪ್ತಗಾಂಗೇಯ ಚೇಲಾ
ಶರಧಿ ತನಯಲೋಲಾ ಶಕ್ವರೀಕಾರಿ ಫಾಲ
ಶಿರಿ ಅಜಭವ ಮೂಲಾ ಶುದ್ಧ ಕಾರುಣ್ಯ ಲೀಲಾ
ಪುರಹರ ಸುಖ ಲೀಲಾ ಪಾಹಿ ಗೋಪಾಲ ಬಾಲಾ || ಪತಿತ ಪಾವನ ಪಾದ ಶತಕೋಟಿ ರವಿತೇಜ
ಟೊಂಕದ ಮೇಲೆ ಕೈಯಿಟ್ಟು ಇಟ್ಟಿಗೆ ಮೇಲೆ ನಿಂತಾ
ಸತ್ಯ ಸಂಕಲ್ಪ ನೀ ನಿತ್ಯ ತೃಪ್ತನು ನಿನ್ನ
ಭಕ್ತ ವಾತ್ಸಲ್ಯಕ್ಕೆ ಮಿತಿಯಿಲ್ಲವಯ್ಯಾ ||
Categories: Stotra - Pooja

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ (ತಂದೆ ಶ್ರೀಪತಿವಿಠ್ಠಲ ದಾಸರು)

Sat, 06/30/2012 - 12:10

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ || ಪ ||

ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ || ಅ.ಪ ||

ವನಜಭವಾದಿ ಸಮಸ್ತ ಸುರವ್ರಾತಾ-ವಂದಿತ ಶ್ರೀನಾಥಾ
ಪ್ರಣತಾರ್ಥಾಹರನೆ ಕಾಮಿತಫಲದಾತಾ-ಮುನಿಗಣಸಂಧ್ಯಾ ತಾ
ನೆನೆವ ಜನರ ಮನದೊಳಿಹ ವಿಖ್ಯಾತಾ-ಭುವನಾದಿನಾಥಾ
ಘನಮಹಿಮ ಒಲಿದು ಪಾಲಿಸೆನ್ನ ಮಾತಾ-ದಯಮಾಡಿ ತ್ವರಿತಾ || ೧ ||

ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂ
ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾ
ದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇ
ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-ಪೊರೆಯೆಂದು ನುಡಿವೇ || ೨ ||

ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀ
ಚೆಂದದಿಂದ ಕರವಿಟ್ಟು ಕಟಿಗಳಲ್ಲಿ-ಈ ಸುಕ್ಷೇತ್ರದಲೀ
ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ
ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ-ಅನಾಥ ಬಂಧೋ || ೩ ||


Categories: Stotra - Pooja

ಹರಿ ದಿನದಲಿ ಉಂಡ ನರರಿಗೆ (ಶ್ರೀಪುರಂದರದಾಸರು)

Fri, 06/29/2012 - 21:57

ರಾಗ: ಶಂಕರಾಭರಣ                        ತಾಳ: ಆಟ

ಹರಿ ದಿನದಲಿ ಉಂಡ ನರರಿಗೆ ಘೋರ
ನರಕ ತಪ್ಪದು ಎಂದು ಶ್ರುತಿಯು ಸಾರುತಲಿದೆ || ಪ ||

ಗೋವ ಕೊಂದ ಪಾಪ ಸಾವಿರ ವಿಪ್ರರ
ಜೀವಹತ್ಯವ ಮಾಡಿದ ಪಾಪವು
ಭಾವಜನಯ್ಯನ ದಿನದಲುಂಡವರಿಗೆ
ಕೀವಿನೊಳಗೆ ಹಾಕಿ ಕುದಿಸುವ ಯಮನು || ೧ ||

ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿ
ಅಂದಿನ ಅನ್ನವು ನಾಯ್‍ಮಾಂಸವು
ಮಂದರಧರನ ದಿನದಲುಂಡವರನು
ಹಂದಿಯ ಸುಡುವಂತೆ ಸುಡಿಸುವ ಯಮನು || ೨ ||

ಅನ್ನ ಉದಕ ತಾಂಬೂಲ ದರ್ಪಣಗಳು
ಚಿನ್ನ ವಸ್ತ್ರಗಳೆಲ್ಲ ವರ್ಜಿತವು
ತನ್ನ ಸತಿಯ ಸಂಗ ಮಾಡುವ ಮನುಜನ
ಬೆನ್ನಲಿ ಕರುಳ ತೆಗೆಸುವ ಯಮನು || ೩ ||

ಜಾವದ ಜಾಗರ ಕ್ರತು ನಾಲ್ಕು ಸಾವಿರ
ಜಾವನಾಲ್ಕರ ಫಲಕೆ ಮಿತಿಯಿಲ್ಲವು
ದೇವದೇವನ ದಿನದಿ ನಿದ್ರೆಯಗೈದರೆ ಹುರಿ-
ಗಾವಲಿನೊಳು ಹಾಕಿ ಹುರಿಸುವ ಯಮನು || ೪ ||

ಇಂತು ಏಕಾದಶೀ ಉಪವಾಸ ಜಾಗರ
ಸಂತತ ಕ್ಷೀರಾಬ್ಧಿಶಯನನ ಪೂಜೆ
ಸಂತೋಷದಿಂದಲಿ ಮಾಡಿದ ಜನರಿಗ-
ನಂತಫಲವನೀವ ಪುರಂದರವಿಠಲ || ೫ ||


Categories: Stotra - Pooja

ಶ್ರೀಗೋಪೀಗೀತಮ್

Wed, 06/13/2012 - 14:56

ತವ ಕಥಾಮೃತಂ ತಪ್ತಜೀವನಂ ಕವಿಭಿರೀಡಿತಂ ಕಲ್ಮಷಾಪಹಮ್ |
ಶ್ರವಣಮಂಗಲಂ ಶ್ರೀಮದಾತತಂ ಭುವಿ ಗೃಣಂತಿ ತೇ ಭೂರಿದಾ ಜನಾಃ ||

ಶ್ರೀಗೋಪೀಗೀತಮ್

ಗೋಪ್ಯಾ ಊಚುಃ -

ಜಯತಿ ತೇಽಧಿಕಂ ಜನ್ಮನಾ ವ್ರಜಃ
ಶ್ರಯತ ಇಂದಿರಾ ಸಾಧು ತತ್ರ ಹಿ |
ದಯಿತ ದೃಶ್ಯತಾಂ ತ್ವಾದಿದೃಕ್ಷತಾಂ
ತ್ವಯಿ ಧೃತಾಸವಸ್ತ್ವಾಂ ವಿಚಿನ್ವತೇ || ೧ ||

ವ್ರಜಜನಾರ್ತಿಹನ್ ವೀರ ಯೋಷಿತಾಂ
ನಿಜಜನಸ್ಮಯಧ್ವಂಸನಸ್ಮಿತ |
ಭಜ ಸಖೇ ಭವೇ ಕಿಂಕರೀಃ ಸ್ಮ ನೋ
ಜಲರು ಹಾನನಂ ಚಾರುದರ್ಶಯನ್ || ೨ ||

ಶರದುದಾಶಯೇ ಸಾಧುಜಾತಸ-
ಸ್ಸರಸಿಜೋದರ ಶ್ರೀಮುಷಾದೃಶಾ |
ಸುರತನಾಥ ತೇ ಶುಲ್ಕದಾಸಿಕಾ
ವರದ ನಿಘ್ನತೋ ನೇಹ ಕಿಂ ವಧಃ || ೩ ||

ವಿಷಜಲಾಶಯಾದ್ವ್ಯಾಲರಾಕ್ಷಸಾ-
ದ್ವರ್ಷಮಾರುತಾದ್ವೈದ್ಯುತಾನಲಾತ್ |
ವೃಷಮಯಾದ್ಭಯಾದ್ವಿಶ್ವತೋಮುಖಾ-
ದ್ವೃಷಭ ತೇ ವಯಂ ರಕ್ಷಿತಾ ಮುಹುಃ || ೪ ||

ಸ ಖಲು ಗೋಪಿಕಾನಂದನೋ ಭವಾ-
ನಖಿಲದೇಹಿನಾಮಂತರಾತ್ಮದೃಕ್ |
ವಿಖನಸಾರ್ಚಿತೋ ವಿಶ್ವಗುಪ್ತಯೇ
ಸಖ ಉದೇಯಿವಾನ್ ಸಾತ್ವತಾಂ ಕುಲೇ || ೫ ||

ವಿರಚಿತಾಭಯಂ ವೃಷ್ಣಿವರ್ಯ ತೇ
ಶರಣಮೀಯುಷಾಂ ಸಂಸೃತೇರ್ಭಯಾತ್ |
ಕರಸರೋರುಹಂ ಕಾಂತಕಾಮದಂ
ಶಿರಸಿ ಧೇಹಿ ನಃ ಶ್ರೀಕರಗೃಹಮ್ || ೬ ||

ಪ್ರಣತ ದೇಹಿನಾಂ ಪಾಪಕರ್ಶನಂ
ತೃಣಚರಾನುಗಂ ಶ್ರೀನಿಕೇತನಮ್ |
ಫಣಿಫಣಾರ್ಪಿತಂ ತೇ ಪದಾಂಬುಜಂ
ಕೃಣು ಕುಚೇಷು ನಃ ಕೃಂಧಿ ಹೃಚ್ಛಯಮ್ || ೭ ||

ಮಧುರಯಾ ಗಿರಾ ವಲ್ಗುವಾಕ್ಯಯಾ
ಬುಧಮನೋಜ್ಞಯಾ ಪುಷ್ಕರೇಕ್ಷಣ |
ವಿಧಿಕರೀರಿಮಾ ವೀರ ಮುಹ್ಯತೀ-
ರಧರಸೀಧುನಾಽಽಪ್ಯಾಯಯಸ್ವ ನಃ || ೮ ||

ತವ ಕಥಾಮೃತಂ ತಪ್ತಜೀವನಂ
ಕವಿಭಿರೀಡಿತಂ ಕಲ್ಮಷಾಪಹಮ್ |
ಶ್ರವಣಮಂಗಲಂ ಶ್ರೀಮದಾತತಂ
ಭುವಿ ಗೃಣಂತಿ ತೇ ಭೂರಿದಾ ಜನಾಃ || ೯ ||

ಪ್ರಹಸಿತಂ ಪ್ರಿಯ ಪ್ರೇಮವೀಕ್ಷಣಂ
ವಿಹರಣಂ ಚ ತೇ ಧ್ಯಾನಮಂಗಲಮ್ |
ರಹಸಿ ಸಂವಿದೋ ಯಾ ಹೃದಿ ಸ್ಪೃಶ
ಕುಹಕ ನೋ ಮನಃ ಕ್ಷೋಭಯಂತಿ ಹಿ || ೧೦ ||

ಚಲಸಿ ಯದ್ವ್ರಜಾಚ್ಚಾರಯನ್ ಪಶೂನ್
ನಲಿನಸುಂದರಂ ನಾಥ ತೇ ಪದಮ್ |
ಶಿಲತೃಣಾಂಕುರೈಃ ಸೀದತೀತಿ ನಃ
ಕಲಿಲತಾಂ ಮನಃ ಕಾಂತ ಗಚ್ಛತಿ || ೧೧ ||

ದಿನಪರಿಕ್ಷಯೇ  ನೀಲಕುಂತಲೈ-
ರ್ವನರುಹಾನನಂ ಬಿಭ್ರದಾವೃತಮ್ |
ವನರಜಸ್ವಲಂ ದರ್ಶಯನ್‍ಮುಹು-
ರ್ಮನಸಿ ನಃ ಸ್ಮರಂ ವೀರ ಯಚ್ಛಸಿ || ೧೨ ||

ಪ್ರಣತಕಾಮದಂ ಪದ್ಮಜಾರ್ಚಿತಂ
ಧರಣಿಮಂಡಲಂ ಧ್ಯೇಯಮಾಪದಿ |
ಚರಣಪಂಕಜಂ ಶಂತಮಂ ಚ ತೇ
ರಮಣ ನಸ್ತನೇಷ್ವರ್ಪಯಾಧಿಹನ್ || ೧೩ ||

ಸುರತವರ್ಧನಂ ಶೋಕನಾಶನಂ
ಸ್ವರಿತವೇಣುನಾ ಸುಷ್ಠು ಚುಂಬಿತಮ್ |
ಇತರರಾಗವಿಸ್ಮಾರಣಂ ನೃಣಾಂ
ವಿತರ ವೀರ ನಸ್ತೇಽಧರಾಮೃತಮ್ || ೧೪ ||

ಅಟತಿ ಯದ್ಭವಾನಹ್ನಿ ಕಾನನಂ
ತ್ರುಟಿ ಯುಗಾಯತೇ ತ್ವಾಮಪಶ್ಯತಾಮ್ |
ಕುಟಿತಕುಂತಲಂ ಶ್ರೀಮುಖಂ ಚ ತೇ
ಜಡವದೀಕ್ಷತಾಂ ಪಕ್ಷ್ಮನುದ್ದೃಶಾಮ್ || ೧೫ ||

ಪತಿಸುತಾನ್ವಯ ಭ್ರಾತೃಬಾಂಧವಾ-
ನತಿವಿಲಂಘ್ಯ ತೇ ಹ್ಯಚ್ಯುತಾಽಗತಾಃ |
ಗತಿವಿದಸ್ತವೋದ್ಗೀತಮೋಹಿತಾಃ
ಕಿತವ ಯೋಷಿತಃ ಕಸ್ತ್ಯಜೇನ್ನಿಶಿ || ೧೬ ||

ರಹಸಿ ಸಂವಿದಂ ಹೃಚ್ಛಯೋದಯಂ
ಪ್ರಹಸಿತಾನನಂ ಪ್ರೇಮವೀಕ್ಷಣಮ್ |
ಬೃಹದುರಃ ಶ್ರಿಯೋ ವೀರ ವೀಕ್ಷ್ಯ ತೇ
ಮುಹುರತಿಸ್ಪೃಹಾ ಮುಹ್ಯತೇ ಮನಃ || ೧೭ ||

ವ್ರಜವನೌಕಸಾಂ ವ್ಯಕ್ತಿರಂಗ ತೇ
ವೃಜಿನಹಂತ್ರ್ಯಲಂ ವಿಶ್ವಮಂಗಲಮ್ |
ಭಜ ಮನಾಕ್‍ಚ ನಸ್ತ್ವತ್‍ಸ್ಪೃಹಾತ್ಮನಾಂ
ಸ್ವಜನಹೃದ್ರುಜಾಂ ಯನ್ನಿಷೂದನಮ್ || ೧೮ ||

ಶ್ರೀಶುಕ ಉವಾಚ -

ಇತಿ ಗೋಪ್ಯಃ ಪ್ರಗಾಯಂತ್ಯಃ ಪ್ರಲಪಂತ್ಯಶ್ಚ ಚಿತ್ರಧಾ |
ರುರುದುಃ ಸುಸ್ವರಂ ರಾಜನ್ ಕೃಷ್ಣದರ್ಶನಲಾಲಸಾಃ || ೧೯ ||

ತಾಸಾಮಾವಿರಭೂತ್ ಶೌರಿಃ ಸ್ಮಯಮಾನಮುಖಾಂಬುಜಃ |
ಪೀತಾಂಬರಧರಃ ಸ್ರಗ್ವೀ ಸಾಕ್ಷಾನ್ಮನ್ಮಥಮನ್ಮಥಃ || ೨೦ ||

|| ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದಶಮಸ್ಕಂಧೇ ಗೋಪೀಗೀತಂ ಸಮಾಪ್ತಮ್ ||


Categories: Stotra - Pooja

ಮಂಡೆ ಬೋಳಾದರೇನು ಮನಶುದ್ಧಿಯಿಲ್ಲವು (ಶ್ರೀವಾದಿರಾಜಸ್ವಾಮಿಗಳು)

Sun, 04/08/2012 - 21:48

ರಾಗ: ವರಹಾಳಿ        ತಾಳ: ತ್ರಿವಿಡಿ

ಮಂಡೆ ಬೋಳಾದರೇನು ಮನಶುದ್ಧಿಯಿಲ್ಲವು || ಪ ||
ಕಂಡು ಹಯವದನನ್ನ ಒಲಸಿಕೊಂಡವ ಧನ್ಯ || ಅ.ಪ ||

ನಾರದರವತಾರವೆಂದು ಜಗಕೆ ತೋರಿ ಸಿರಿ
ಪುರಂದರದಾಸರ ಮನೆಯಲ್ಲಿ
ಪರಿಪರಿ ಲೀಲೆಯ ಮಾಡಿ ಬಿಡದೆ ನಿತ್ಯ
ಅರಿತು ಅವರ ಸಾಧನಕೆ ಸಾರಥಿಯಾದಿ || ೧ ||

ಗುರು ವ್ಯಾಸಮುನಿ ನಿಮ್ಮ ನೋಡುವೆನೆಂತೆಂದೊಡೆ
ಮರೆ ಮಾಡಿ ಮೂರು ರೂಪ ಜನುಮವೆಂದಿ
ಹರುಷದಿ ಕನಸಿನೊಳಗೆ ಬಂದುಭಯರಿಗೆ
ಅರುಪಿಸಿ ಸ್ವರೂಪ ಅರಿಯದಂತಿದ್ಯೊ ದೇವ || ೨ ||

ಅವರ ಮೇಲಿದ್ದ ದಯ ಎನ್ನ ಮೇಲೆಂದಿಗೋ ದೇವ
ಯಾವುದೂ ಭರವಸೆದೋರದಯ್ಯ
ಕವಿದೆಮ್ಮಭಿಮಾನ ಬಿಟ್ಟರೆ ಬಿಡದಯ್ಯ
ಅವಕಾಲಕ್ಕೆ ನಿನ್ನ ದಾಸನೆಂಬಂತೆ ಮಾಡೊ || ೩ ||

ನಮ್ಮ ಗುರುಗಳ ಸಮ್ಮತದಿಂದುಡುಪಿಯಲ್ಲಿ
ಗಮ್ಮನೆ ಪೇಳಿದೆನು ಸಟೆಯಲ್ಲವು
ಸುಮ್ಮನೆ ತಿಳಿಯದೆ ಅಲ್ಲವೆಂದವರ್ಗಿನ್ನು
ಗಮ್ಮನೆ ತಮಸಿನೊಳಿಹುದು ಸತ್ಯವು || ೪ ||

ಓದಿದಾಕ್ಷಣದಿಂದ ಧನ್ಯನೆಂದೆನು ನಾನು
ಸಾಧಿಸಲಾಪೆನೆ ನಿನ್ನ ಸೇವೆಯನು
ಆದಿಮೂರುತಿ ಸಿರಿಹಯವದನರೇಯ
ಮೋದದಿಂದ ನಿನ್ನ ದಾಸರ ಸಂಗದಲ್ಲಿಡು ಕಂಡ್ಯ || ೫ ||


Categories: Stotra - Pooja

ಘಟಿಕಾಚಲದಿ ನಿಂತಾ ಹನುಮಂತಾ (ಶ್ರೀಪುರಂದರದಾಸರು)

Thu, 04/05/2012 - 20:46

ರಾಗ: ನಾಟ            ತಾಳ: ಆಟ

ಘಟಿಕಾಚಲದಿ ನಿಂತಾ ಹನುಮಂತಾ
ಘಟಿಕಾಚಲದಿ ನಿಂತಾ || ಪ ||

ಘಟಿಕಾಚಲದಿ ನಿಂತ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೊರೆವೆನೆಂದು || ಅ.ಪ ||

ಚತುರಯುಗದಿ ತಾ ಅತಿಬಲವಂತನು ಚತುರ್ಮುಖನಯ್ಯನ
ಚತುರ ಮೂರ್ತಿಗಳ ಚತುರತನದಿ ಭಜಿಸಿ
ಚತುರ್ಮುಖನಾಗಿ ಚತುರ್ವಿಧ ಫಲಕೊಡುತ || ೧ ||

ಸರಸಿಜಭವಗೋಸ್ಕರ ಕಲ್ಮಷದೂರ ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯನರಹರಿಗೆದುರಾಗಿ
ಸ್ಥಿರಯೋಗಾಸನದಿ ವರವಕೊಡುವೆನೆಂದು || ೨ ||

ಶಂಖಚಕ್ರವಧರಿಸಿ ಭಕ್ತರ ಮನ ಪಂಕವ ಪರಿಹರಿಸಿ
ಪಂಕಜನಾಭ ಶ್ರೀಪುರಂದರವಿಠಲ
ಬಿಂಕದ ಸೇವಕ ಸಂಕಟಕಳೆಯುತ || ೩ ||


Categories: Stotra - Pooja

ಪವಮಾನ ಜಗದ ಪ್ರಾಣ ಸಂಕರುಷಣ (ಶ್ರೀವಿಜಯದಾಸರು)

Thu, 04/05/2012 - 20:29

ರಾಗ: ತೋಡಿ            ತಾಳ: ಆದಿ

ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ
ಭವಭಯಾರಣ್ಯ ದಹನಾ || ಪ ||
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರೀಯಾ || ಅ.ಪ ||

ಹೇಮಕಚ್ಛುಟ ಉಪವೀತಧರಿತ ಮಾರುತಾ
ಕಾಮಾದಿ ವರ್ಗರಹಿತಾ
ವ್ಯೂಮಾದಿ ಸಕಲ ವ್ಯಾಪುತಾ ಸತತ ನಿರ್ಭೀತಾ
ರಾಮಚಂದ್ರನ ನಿಜ ದೂತಾ
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ
ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು || ೧ ||

ವಜ್ರಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ ನಿರ್ಜರ ಮಣಿದಯಾ
ಪಾರಾವಾರಾ ಉದಾರಾ ಸಜ್ಜನರಘ ಪರಿಹಾರಾ
ಅರ್ಜುನಗೊಲಿದಂದು ಧ್ವಜವಾಗಿ ನೀ ನಿಂದು
ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪದಧೂಳಿ
ಮೂರ್ಜಗದಲಿ ಭವವರ್ಜಿತನೆನಿಸು || ೨ ||

ಪ್ರಾಣ, ಅಪಾನ, ವ್ಯಾನೋದಾನ ಸಮಾನ
ಆನಂದ ಭಾರತೀರಮಣ ನೀನೆ ಶರ್ವಾದಿ
ಗೀರ್ವಾಣಾದ್ಯಮರರಿಗೆ ಜ್ಞಾನಧನ
ಪಾಲಿಪ ವರೇಣ್ಯ ನಾನು ನಿರುತದಲಿ
ಏನೆಸಗುವೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ
ಪ್ರಾಣನಾಥ ಶ್ರೀವಿಜಯವಿಠ್ಠಲ
ಕಾಣಿಸಿ ಕೊಡುವುದು ಭಾನುಪ್ರಕಾಶಾ || ೩ ||


Categories: Stotra - Pooja

ಎಂಥಾ ಬಲವಂತನೊ ಕುಂತಿಯ ಸುಜಾತನೊ (ಶ್ರೀಪುರಂದರದಾಸರು)

Thu, 04/05/2012 - 20:26

ರಾಗ: ಶಹನ         ತಾಳ: ಆದಿ

ಎಂಥಾ ಬಲವಂತನೊ ಕುಂತಿಯ ಸುಜಾತನೊ || ಪ ||
ಭಾರತಿಗೆ ಕಾಂತನೊ ನಿತ್ಯ ಶ್ರೀಮಂತನೊ || ಅ.ಪ ||

ರಾಮಚಂದ್ರನ ಪ್ರಾಣನೊ ಅಸುರಹೃದಯಬಾಣನೊ
ಖಳರ ಗಂಟಲಗಾಣನೊ ಜಗದೊಳಗೆ ಪ್ರವೀಣನೊ || ೧ ||

ಕುಂತಿಯ ಕಂದನೊ ಸೌಗಂಧಿಕವ ತಂದನೊ
ಕುರುಕ್ಷೇತ್ರಕೆ ಬಂದನೊ ಕೌರವರ ಕೊಂದನೊ || ೨ ||

ಭಂಡಿ ಅನ್ನವನುಂಡನೊ ಬಕನ ಪ್ರಾಣವ ಕೊಂಡನೊ
ಭೀಮ ಪ್ರಚಂಡನೊ ದ್ರೌಪದಿಗೆ ಗಂಡನೊ || ೩ ||

ವೈಷ್ಣವಾಗ್ರಗಣ್ಯನೊ ಸಂಚಿತಾಗ್ರಪುಣ್ಯನೊ
ದೇವವರೇಣ್ಯನೊ ದೇವಶರಣ್ಯನೊ || ೪ ||

ಮಧ್ವಶಾಸ್ತ್ರವ ರಚಿಸಿದನೊ ಸದ್ವೈಷ್ಣವರ ಸಲಹಿದನೊ
ಉಡುಪಿಲಿ ಕೃಷ್ಣನ ನಿಲಿಸಿದನೊ ಪುರಂದರವಿಠಲಗೆ ದಾಸನೊ || ೫ ||


Categories: Stotra - Pooja

Pages